ಕೋಝಿಕ್ಕೋಡ್: ತಾಮರಶ್ಶೇರಿಯಲ್ಲಿ ಶಾಲಾ ವಿದ್ಯಾರ್ಥಿಯೊಬ್ಬನ ವಾಟರ್ ಬಾಟಲ್‌ನಲ್ಲಿ ನಾಟಿ ಸಾರಾಯಿ (ಕಳ್ಳಭಟ್ಟಿ) ಪತ್ತೆಯಾಗಿದೆ. ಶಿಕ್ಷಕರು ನಡೆಸಿದ ತಪಾಸಣೆ ವೇಳೆ ಈ ನಾಟಿ ಸಾರಾಯಿ ಪತ್ತೆಯಾಗಿದೆ. ಮತ್ತೊಬ್ಬ ವಿದ್ಯಾರ್ಥಿ ಈ ನಾಟಿ ಸಾರಾಯಿಯನ್ನು ತಂದುಕೊಟ್ಟಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿದ್ಯಾರ್ಥಿಯ ಮನೆಯ ಸಮೀಪದ ತೋಟದಿಂದ 56 ಬಾಟಲಿ (28 ಲೀಟರ್) ನಾಟಿ ಸಾರಾಯಿಯನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ನಾಟಿ ಸಾರಾಯಿಯನ್ನು ಮಗುವಿನ ಸಾಕು ತಂದೆ (ಮಲತಂದೆ) ತಯಾರಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈತನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ
Tags
ಕೋಜಿಕ್ಕೋಡ್
